ಕರಿಯ 2, 2017ರ ಭಾರತದ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಪ್ರಭು ಶ್ರೀನಿವಾಸ್ ಅವರು ನಿರ್ದೇಶಿಸಿದ್ದಾರೆ. ತಮ್ಮ ಸಂತೋಷ್ ಎಂಟರ್ಪ್ರೈಸಸ್ ಎಂಬ ಸಂಸ್ಥೆಯ ಮೂಲಕ ಆನೇಕಲ್ ಬಾಲರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಸಂತೋಷ್ ಬಾಲರಾಜ್ ಮತ್ತು ಮಯೂರಿ ನಟಿಸಿದ್ದಾರೆ. ಕರಣ್ ಬಿ ಕೃಪರವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಶ್ರೀನಿವಾಸ್ ದೇವಾಂಸಮ್ ರವರು ಛಾಯಾಗ್ರಹಣದ ಕೆಲಸವನ್ನು ನಿಭಾಯಿಸಿದ್ದಾರೆ. ಡಿಫರೆಂಟ್ ಡ್ಯಾನಿ,ರವಿವರ್ಮ, ಮಾಸ್ ಮಾದ ಮತ್ತು ವಿಕ್ರಂ ಚಿತ್ರಕ್ಕೆ ಸಾಹಸ ನಿರ್ದೇಶನವನ್ನು ಮಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಈ ಚಿತ್ರವು ಘಜನಿಕಾಂತ್ ಹೆಸರಿನಲ್ಲಿ ಡಬ್ ಮಾಡಲಾಗಿದೆ. ಮೂಲಗಳ ಪ್ರಕಾರ ಈ ಚಿತ್ರವು ಕೊರಿಯನ್ ಭಾಷೆಯಲ್ಲಿ ಡಬ್ ಆಗಲಿದೆ. == ಪಾತ್ರವರ್ಗ == ಕರಿಯಾ ಪಾತ್ರದಲ್ಲಿ ಸಂತೋಷ್ ಬಲರಾಜ್ ಮಯೂರಿ ಕ್ಯಾತರಿ ಅಜಯ್ ಘೋಷ್ ಸಾಧು ಕೋಕಿಲಾ ಪ್ರಭಾಕರ್ ಅಶೋಕ್ ವರ್ಧನ್ ನಾಗೇಶ್ ಕಾರ್ತಿಕ್ ಉಷಾ == ಉಲ್ಲೇಖಗಳು ==